Saturday, 24 December 2011

ಸಿಕ್ಕ ಮೀನು

ಹಸಿರಿನ ತಪ್ಪಲಿನಲ್ಲಿ ಕುಹೂ ಕುಹೂ ಎಂದು ಕೂಗುವ ಕೋಗಿಲೆ ನೀ ಆದರೆ....
ಆಗಸದಿಂದ ಭೂಮಿಗೆ ಬೀಳುವ ಜಲಧಾರೆಯಲ್ಲಿ ಸಿಕ್ಕ ಮೀನು ನೀನು....

Thursday, 1 December 2011

ಕಡಲೆಕಾಯಿ ಪರಿಷೆ

ಘಮ್,ಘಮ್ ಎಂದು ಸುವಾಸನೆ ಬೀರುವ ಬೇಯಿಸಿರುವ ಕಡಲೆಕಾಯಿ,ಹುರಿದಿರುವ ಕಡಲೆಕಾಯಿ, ಹಸಿ ಕಡಲೆಕಾಯಿ ಎಂದು ಕೂಗತ್ತಾ ವ್ಯಾಪಾರ ಮಾಡುವ ವ್ಯಾಪಾರಿಗಳು,ಚೌಕಾಸಿ ಮಾಡುವ ಜನರು,ಬೆಂಡು ಬತ್ತಾಸ್,ಸಣ್ಣ ಮಕ್ಕಳ ಆಟಿಕೆಗಳು, ಗುರ್ ಗುರ್ ಶಬ್ಧ ಮಾಡುವ ಜಾಯಿಟ್‌ವಿಲ್,ಕೊಲಂಬಸ್‌ಗಳನ್ನು ಆಡುವ ನಗರದ ಹುಡುಗ ಹುಡುಗಿಯರು.

ದೊಡ್ಡ ಬಸವಣ್ಣಕ್ಕೆ ಹೋಗುವ ಭಕ್ತಾಧಿಗಳು ಎಲ್ಲಾ ಸೇರಿ ಹಳ್ಳಿ ಸೊಗಡನ್ನು ನಗರದ ಜನರಿಗೆ ನೀಡುವ ಹಳ್ಳಿ ಸೊಗಡೆ ಬಸವನ ಗುಡಿಯಲ್ಲಿ ನಡೆಯುವ ಮೂರು ದಿನಗಳ ಜಾತ್ರೆ ಕಡಲೆಕಾಯಿ ಪರಿಷೆ. ಪ್ರತಿ ವರ್ಷ ಕಡೆಯ ಕಾರ್ತೀಕ ಸೋಮವಾರ ಮಂಗಳವಾರ,ಬುಧವಾರ ಈ ಜಾತ್ರೆ ನಡೆಯುತ್ತದೆ.

ಈ ಜಾತ್ರೆಯ ವಿಶೇಷವೆ ಕಡಲೆಕಾಯಿಯನ್ನು ಹೆಚ್ಚಾಗಿ ಮಾರಾಟ ಮಾಡುವುದು. ಮತ್ತು ದೊಡ್ಡ ಬಸವಣ್ಣನಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡುವುದು ವರ್ಷದಿಂದ ವರ್ಷಕ್ಕೆ ನೀಡುವ ವಾಡಿಕೆ. ಕಾರಣ ವರ್ಷದಿಂದ ವರ್ಷಕ್ಕೆ ಕಡಲೆಕಾಯಿ ಬೆಳೆಯು ಹೆಚ್ಚಾಗಿ ಸಮೃದ್ಧಿಯಾಗಿ ಬೆಳೆಯಲು ಕಡಲೆಕಾಯಿಯನ್ನು ರೈತರು ಪ್ರಸಾದವಾಗಿ ನೀಡುತ್ತಾರೆ.ಜಾತ್ರೆ ನಡೆಯುವ ದಿನಗಳಲ್ಲಿ ಬಸವಣ್ಣನಿಗೆ ವಿಶೇಷ ಅಲಂಕಾರ, ಪ್ರಸಾದ ಅಭಿಷೇಕಗಳು ವಿಶೇಷವಾಗಿರುತ್ತದೆ.

ವಿಶೇಷವಾಗಿ ದೇವಸ್ಥಾನವನ್ನು ದೀಪಲಂಕಾರದಿಂದ ಕಂಗೊಳಿಸಿರುವಂತೆ ಮಾಡಿರುತ್ತಾರೆ.ಮತ್ತು ಪ್ರಸಾದವನ್ನು ಸಹ ವಿನಿಯೊಗಿಸಲಾಗುತ್ತದೆ.ಈ ಎಲ್ಲಾ ವ್ಯವಸ್ಥೆಯನ್ನು ದೇವಸ್ಥಾನ ಮಂಡಳಿಯೆ ಮಾಡುತ್ತದೆ. ಈ ಹಿಂದೆ ಬಸವನಗುಡಿಯಲ್ಲಿರುವ ಈ ಜಾಗ ಅನೇಕ ಹಳ್ಳಿಗಳಾಗಿದ್ದವು ಅವುಗಳೆಂದರೆ ಸುಂಕೇನ ಹಳ್ಳಿ, ನಾಗಸಂದ್ರ ಮತ್ತು ಮಾವಳ್ಳಿ ಈ ಹಳ್ಳಿಗಳಲ್ಲಿ ಹೆಚ್ಚಾಗಿ ಕಡಲೆಕಾಯಿ ಮತ್ತು ಕಬ್ಬು ಬೆಳೆಗಳನ್ನು ಬೆಳೆಯಲಾಗುತಿತ್ತು ಈ ರೈತರು ಬೆಳೆದ ಬೆಳೆಯನ್ನು  ಬಸವಣ್ಣ ಹಾಳು ಮಾಡುತಿತ್ತು ಆಗ ಹಳ್ಳಿಯ ರೈತರು ಸಭೆ ಸೇರಿ ಬಸವಣ್ಣನನ್ನು ಓಡಿಸುವಾಗ ಬಸವಣ್ಣ ಓಡಿ ಬಂದು ಇಲ್ಲಿ ನೆಲೆಸಿದನು ಎಂಬುದು ಹಿಂದಿನ ಕಥೆ ಹೇಳುತ್ತದೆ.

ಈ ದೇವಸ್ಥಾನವನ್ನು ಆಗಿನ ಕೆಂಪೇಗೌಡ ಕಟ್ಟಿಸಿದ್ದಾನೆ.ಇಂದಿಗೂ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತಾಧಿಗಳು ಬರುತ್ತಾರೆ. ಜಾತ್ರೆಯ ದಿನ ನಗರ ಜೀವನ ಸಾಕಾಗಿ ಹಳ್ಳಿಯ  ಸೊಬಗನ್ನು ಬೇಕು ಎನ್ನುವ ಅನೇಕ ಸಾವಿರಾರು ಜನರು, ವ್ಯಾಪಾರಿಗಳು ಇಲ್ಲಿಗೆ ಧಾವಿಸುತ್ತಾರೆ.